ಕನ್ನಡ ಚಿತ್ರರಂಗ... ಅಂದು ........ ಇಂದು ...

೭೦-೮೦ ರ ದಶಕ ಕನ್ನಡ ಚಿತ್ರರಂಗ ಉತ್ತುಂಗದಲ್ಲಿದ್ದಂತ ಕಾಲ. ಬರೀ ಚಿತ್ರರಂಗನೆ ಯಾಕೆ, ಕನ್ನಡ ಸಾಹಿತ್ಯ ಜಗತ್ತು ಕೂಡ ಉತ್ತುಂಗದಲ್ಲಿದ್ದಂತ ಕಾಲ. ಆಗಿನ ಕನ್ನಡ ಚಿತ್ರಗಳನ್ನ ನೋಡಿ ಅಥವಾ ಆಗಿನ ಕಾಲದ ಸಾಹಿತ್ಯ ರಚನೆ ನೋಡಿದ್ರೆ ಮೈ ಪುಳಕಿತಗೊಲ್ಳುತ್ತೆ. ಅದು ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯ ಸುರಿಮಳೆ ಆಗ್ತಿದ್ದಂತ ಕಾಲ. ಅದೇ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲೂ ಕ್ರಾಂತಿ ನಡೀತಿತ್ತು ಅನ್ನಬಹುದು. ಆಗಿನ ಕಾಲದಲ್ಲಿ ಬಂದಂತ ಚಿತ್ರಗಳನ್ನ ನೋಡಿದರೆ ನಿಜಕ್ಕೂ ಕನ್ನಡದಲ್ಲಿ ಇಂತಾ ಚಿತ್ರಗಳು ಬಂದಿದ್ವಾ ಅಂತಾ ಆಶ್ಚರ್ಯ ಆಗುತ್ತೆ!!! ಆಗಿನ ಕಾಲದಲ್ಲಿ ಎಂತೆಂತಾ ನಿರ್ದೇಶಕರಿದ್ರು, ಸಂಗೀತಗಾರರಿದ್ರು, ಸಾಹಿತಿಗಳಿದ್ರು, ನಟರಿದ್ರು, ಹಾಡುಗಾರರಿದ್ರು .... ಅಬ್ಬ ಎಂಥ ಕಾಲ ಅದು. ಕಲಾ ಚಿತ್ರಗಳ ಕ್ರಾಂತಿಯುತ ಕಾಲ. ಸಿದ್ದಲಿಂಗಯ್ಯ, ಹುಣಸೂರ್ ಕೃಷ್ಣಮೂರ್ತಿ,ಪುಟ್ಟಣ್ಣ ಕಣಗಾಲ್, ಬಿ.ವಿ. ಕಾರಂತ್, ಗಿರೀಶ್ ಕಾರ್ನಾಡ್, ದೊರೈ ಭಗವಾನ್ ಮುಂತಾದ ಶ್ರೇಷ್ಠ ನಿರ್ದೇಶಕರಿದ್ದಂತ ಕಾಲ. ಆಗಿನ ಕಾಲದಲ್ಲಿ ಇಳಯರಾಜ, ಮಣಿರತ್ನಂ,ಅನಿಲ್ ಕಪೂರ್, ನಾಸಿರುದ್ದೀನ್ ಷಾ, ಕಮಲ್ ಹಾಸನ್, ರಜನೀಕಾಂತ ಹಾಗೆ ಇನ್ನಿತರ ಮಹಾನ್ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡ್ತಿದ್ದರು. ಆಗಿನ ಕಾಲದ ಚಿತ್ರಗೀತೆಗಳನ್ನ ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ. ಆ ಹಾಡುಗಳಲ್ಲಿ ಎಂತಹ ಅರ್ಥ ಅಡಗಿತ್ತು. ಹಾಗೆ ಆ ಚಿತ್ರಗಳ ಕಥೆ ಎಲ್ಲ ವಿಷಯಗಳನ್ನೂ ಆವರಿಸಿತ್ತು. ಸಾಮಾಜಿಕ,ಪುರಾಣಿಕ, ಕೌಟುಂಬಿಕ, ಮಾನಸಿಕ ಹೀಗೆ ಹತ್ತು ಹಲವು ವಿಷಯಗಳ ಮೇಲೆ ಚಿತ್ರಗಳು ನಿರ್ಮಾಣಗೊಳ್ಳುತ್ತಿದ್ದವು. ಆಗಿನ ಚಿತ್ರಗಳನ್ನ ನೋಡಿ ಜೀವನದಲ್ಲಿ ಒಳ್ಳೆ ವಿಷಯಗಳನ್ನ ಕಲಿಯಬಹುದಾಗಿತ್ತು.
ಅದೇ ಈಗಿನ ಕಾಲದ ಚಿತ್ರ ನೋಡೋದಕ್ಕೆ ಅಸಹ್ಯ ಆಗುತ್ತೆ. ಈಗಿನ ಚಿತ್ರಗಳಲ್ಲಿ ಹಿಂಸೆ,ಅಶ್ಲೀಲತೆ ಇಲ್ಲ ಅಂದ್ರೆ ಅದು ಚಿತ್ರಾನೇ ಅಲ್ಲ ಅನ್ನೋ ಥರಾ ಆಗಿದೆ. ಅದೇನು ಕಾಲದ ಮಹಿಮೇನೋ ಏನೋ ಈಗಿನ ಕನ್ನಡ ಚಿತ್ರಗಳು, ಕನ್ನಡ ಸಾಹಿತ್ಯ ರಂಗ ಎಲ್ಲ ಪಾತಾಳ ಸೇರೋ ಸ್ಥಿತೀಲಿ ಇವೆ. ಅದು ಯಾರ ಕಣ್ಣು ಬಿತ್ತೋ ಏನೋ ಕನ್ನಡ ಸಂಸ್ಕೃತಿನೇ ತಳಹದಿ ಹಿಡೀತಿದೆ. ನಾವು ಕನ್ನಡಿಗರು ಒಬ್ಬಬ್ಬರಾಗಿ ಒಳ್ಳೆ ಸಾಹಿತಿಗಳು,ಒಳ್ಳೆ ಚಿತ್ರ ನಿರ್ಮಾಪಕರು, ಒಳ್ಳೆ ನಟರು, ಒಳ್ಳೆ ಸಂಗೀತಕಾರರನ್ನ ಕಳೆದುಕೊಳ್ತಿದೀವಿ. ದಿನೇ ದಿನೇ ಕರ್ನಾಟಕ ಹದೆಗೆಡ್ತಿದೆ, ಕನ್ನಡ ಸಂಸ್ಕೃತಿ ಹದೆಗೆಡ್ತಿದೆ. ಕನ್ನಡಿಗರು ತಮ್ಮ ಒಳ್ಳೆ ಗುಣಗಳನ್ನ ಕಳೆದುಕೊಳ್ತಿದಾರೆ. ಹಿಂದೆ ಒಂದು ಕಾಲದಲ್ಲಿ ಕನ್ನಡಿಗರ ಜೊತೆ ಗುರುತಿಸುತ್ತಿದ್ದಂತ ಸೌಮ್ಯತೆ, ಸಹಭಾಗಿತ್ವ, ವಿಶ್ವ ಮಾನವತೆ ಮುಂತಾದ ಗುಣಗಳನ್ನ ಕನ್ನಡಿಗರು ದೂರ ತಳ್ತಿದಾರೆ. ರೌಡಿ ಸಂಸ್ಕೃತಿ ಕರ್ನಾಟಕದಲ್ಲಿ ಬೇರೂರಿದೆ. ಕರ್ನಾಟಕ ಉಗ್ರಗಾಮಿಗಳ ವಾಸಸ್ಥಳವಾಗಿ ಮಾರ್ಪಡುತ್ತಿದೆ. ಇದರ ಪ್ರಭಾವ ನಮ್ಮ ಚಿತ್ರರಂಗದ ಮೇಲೂ ಆಗಿದೆ ಅನ್ನೋದಕ್ಕೆ ಉದಾಹರಣೆ ನಮ್ಮ ಇಂದಿನ ಚಿತ್ರಗಳು. ಪುಣ್ಯಕೋಟಿಯ ಕಥೆಯನ್ನು ಚಿತ್ರಿಸುತ್ತಿದ್ದಂತ ನಮ್ಮ ಚಿತ್ರರಂಗ, ಇಂದು ರೌಡಿ ಸಂಸ್ಕೃತಿಯನ್ನೇ ಬಂಡವಾಳವಾಗಿ ಇಟ್ಟುಕೊಂಡು ಚಿತ್ರಗಳನ್ನ ತಯಾರಿಸ್ತಾ ಇದೆ. ಅದಕ್ಕೆ ಒಳ್ಳೆ ಉದಾಹರಣೆ ಅಂದ್ರೆ ಮೆಂಟಲ್ ಮಂಜ, ಕಲಾಸಿ ಪಾಳ್ಯ, ಮಜೆಸ್ಟಿಕ್ ಇನ್ನಿತರ ಚಿತ್ರಗಳು. ಈಗ ಕಾಲ ಹೇಗಿದೆ ಅಂದ್ರೆ ಚಿತ್ರದಲ್ಲಿ ಮಚ್ಚು ಲಾಂಗುಗಳು ಇಲ್ಲ ಅಂದ್ರೆ ಚಿತ್ರ ತೋಪ್ ಅಂತಾನೆ ಅರ್ಥ:-( .
ಹಾಗಾದರೂ ಇಂತಾ ಕೆಟ್ಟ ಚಿತ್ರಗಳ ನಡುವೆ ಒಂದೊಂದು ಒಳ್ಳೆ ಚಿತ್ರಾನೂ ಬರ್ತಾ ಇವೆ. ಮಲಯ ಮಾರುತ, ನಮ್ಮೂರ ಮಂದಾರ ಹೂವೆ, ನೆನಪಿರಲಿ, ಕಲ್ಲರಳಿ ಹೂವಾಗಿ, ಮಠ, ಮಾತಾಡು ಮಾತಾಡು ಮಲ್ಲಿಗೆ ಮುಂತಾದವು. ಇನ್ನು ಮುಂದೇನೂ ಇಂತಾ ಒಳ್ಳೆ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಅಂತಾ ಆಶಿಸುತ್ತಾ ಈ ಲೇಖನ ಮುಗಿಸ್ತೀನಿ :-)

Comments

  1. 70 nE dashaka uttungaddE irabahudu...

    chitragaLanna aayke maaDodralli tappaadaaga asahya aagod sahaja....

    eega varshakke 100 kkinta hechchu cinemagaL barutve...
    avella chennaagE irbEku anta Enu ilvalla...

    aadaroo varshakke 3-4 sadabhiruchi chitragaL banrtalE ive...
    avugaLanna nODokke oLLoLLe theater gaLoo shuruvaagive...
    techincal aagoo sikkaapaTTe mund vardide...
    adara durbaLake kooDa aagtide ...nija...

    sariyaada nirdEshakara chitragaLanna aayke maaDi noDuvudu jaaNatana..

    nenapirali inda eechege andre 2004 rinda 2009 ra oLage naan eNisabhudaada uttama chitragaLu kanishTa 10...

    5 varshagaLalli 10 atyuttama chitragaLu...(kammi alla ansatte)

    nenapirali
    mungaaru maLe
    duniya
    aa dinagaLu
    inthi ninna preethiya (nan mechchina)
    matha
    eddELu manjunatha
    psycho
    avva
    gulaabi talkies

    inna saahityakke barodaadre, omme psycho matte inthi ninna preethiya haaDDugaLanna kELi

    eegiro directorial talent hinde irlillvEno...
    guruprasad - matha/ eddELu
    suri - duniya/ inthi
    yOgraaj- inthi/ mungaaru
    chaitanya- aa dinagaLu
    shashank- moggina manassu

    ishTella iddu complain maaDbaardu..
    nija 70% cinemagaLu flop aagtive....
    ad yaake andre avella commercial success goskara business man gaLu maaDokkoskara....uddEshave tappadaaga geluvu elli?

    adella pakkakkiTTu kaleyatta gamanisidare, kale elloo hogilla ansbahudu

    ReplyDelete
  2. inna kannaDigara soumyate, vishwamaanavate ella elli hogide?

    ee nelada, jalada, bhaasheya prabhaava illi huTTo pratiyobbana mEloo ide....munde kooDa iratte...

    ee naDuve neev nODtaa iro bengaLoorina asahaja beLavaNige, bEre janara hechchina aagamana nim abhipraaya heeg aago haag maaDide ashTe..

    kelavE dinagaLu...aa jana kooDa illina prabhaavakke oLagaagtaare....
    avralliyoo badalaavaNe kaaNo kaala doora illa..

    ReplyDelete

Post a Comment

Popular posts

Give Your Best, Leave the Rest...

The Equalizer Called Time...

What we see is, what we think we see...