Posts

Showing posts from August, 2009

ಕನ್ನಡ ಚಿತ್ರರಂಗ... ಅಂದು ........ ಇಂದು ...

೭೦-೮೦ ರ ದಶಕ ಕನ್ನಡ ಚಿತ್ರರಂಗ ಉತ್ತುಂಗದಲ್ಲಿದ್ದಂತ ಕಾಲ. ಬರೀ ಚಿತ್ರರಂಗನೆ ಯಾಕೆ, ಕನ್ನಡ ಸಾಹಿತ್ಯ ಜಗತ್ತು ಕೂಡ ಉತ್ತುಂಗದಲ್ಲಿದ್ದಂತ ಕಾಲ. ಆಗಿನ ಕನ್ನಡ ಚಿತ್ರಗಳನ್ನ ನೋಡಿ ಅಥವಾ ಆಗಿನ ಕಾಲದ ಸಾಹಿತ್ಯ ರಚನೆ ನೋಡಿದ್ರೆ ಮೈ ಪುಳಕಿತಗೊಲ್ಳುತ್ತೆ. ಅದು ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯ ಸುರಿಮಳೆ ಆಗ್ತಿದ್ದಂತ ಕಾಲ. ಅದೇ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲೂ ಕ್ರಾಂತಿ ನಡೀತಿತ್ತು ಅನ್ನಬಹುದು. ಆಗಿನ ಕಾಲದಲ್ಲಿ ಬಂದಂತ ಚಿತ್ರಗಳನ್ನ ನೋಡಿದರೆ ನಿಜಕ್ಕೂ ಕನ್ನಡದಲ್ಲಿ ಇಂತಾ ಚಿತ್ರಗಳು ಬಂದಿದ್ವಾ ಅಂತಾ ಆಶ್ಚರ್ಯ ಆಗುತ್ತೆ!!! ಆಗಿನ ಕಾಲದಲ್ಲಿ ಎಂತೆಂತಾ ನಿರ್ದೇಶಕರಿದ್ರು, ಸಂಗೀತಗಾರರಿದ್ರು, ಸಾಹಿತಿಗಳಿದ್ರು, ನಟರಿದ್ರು, ಹಾಡುಗಾರರಿದ್ರು .... ಅಬ್ಬ ಎಂಥ ಕಾಲ ಅದು. ಕಲಾ ಚಿತ್ರಗಳ ಕ್ರಾಂತಿಯುತ ಕಾಲ. ಸಿದ್ದಲಿಂಗಯ್ಯ, ಹುಣಸೂರ್ ಕೃಷ್ಣಮೂರ್ತಿ,ಪುಟ್ಟಣ್ಣ ಕಣಗಾಲ್, ಬಿ.ವಿ. ಕಾರಂತ್, ಗಿರೀಶ್ ಕಾರ್ನಾಡ್, ದೊರೈ ಭಗವಾನ್ ಮುಂತಾದ ಶ್ರೇಷ್ಠ ನಿರ್ದೇಶಕರಿದ್ದಂತ ಕಾಲ. ಆಗಿನ ಕಾಲದಲ್ಲಿ ಇಳಯರಾಜ, ಮಣಿರತ್ನಂ,ಅನಿಲ್ ಕಪೂರ್, ನಾಸಿರುದ್ದೀನ್ ಷಾ, ಕಮಲ್ ಹಾಸನ್, ರಜನೀಕಾಂತ ಹಾಗೆ ಇನ್ನಿತರ ಮಹಾನ್ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡ್ತಿದ್ದರು. ಆಗಿನ ಕಾಲದ ಚಿತ್ರಗೀತೆಗಳನ್ನ ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ. ಆ ಹಾಡುಗಳಲ್ಲಿ ಎಂತಹ ಅರ್ಥ ಅಡಗಿತ್ತು. ಹಾಗೆ ಆ ಚಿತ್ರಗಳ ಕಥೆ ಎಲ್ಲ ವಿಷಯ...